Current Date 10 Jun, 2026

ಭೈರತಿ ರಣಗಲ್'ನ ಮತ್ತೊಂದು ಸಾಂಗ್ ರಿಲೀಸ್: ಸ್ಯಾಂಡಲ್‌ವುಡ್‌ಗೆ 'ಕಾವಲಿಗ'ನಾಗುತ್ತಾರಾ ಶಿವಣ್ಣ

ಸೆಂಚುರಿ ಸ್ಟಾರ್ ಶಿವಣ್ಣ ನಟನೆಯ 'ಭೈರತಿ ರಣಗಲ್' ಸಿನಿಮಾಗಾಗಿ ಶಿವ ಸೈನ್ಯ ಕಾಯುತ್ತಿದೆ. 'ಮಫ್ತಿ' ಸಿನಿಮಾದ ಅವತಾರದಲ್ಲಿ ಮತ್ತೆ ಶಿವಣ್ಣನನ್ನು ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಇದೇ ತಿಂಗಳು ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಧ್ರುವ ಸರ್ಜಾ 'ಮಾರ್ಟಿನ್‌' ತಮ್ಮ ಸಿನಿಮಾವನ್ನು ಒಂದು ತಿಂಗಳು ಮುಂದಕ್ಕೆ ಹಾಕಿದ್ದರು. ಹಾಗಂತ ಶಿವಣ್ಣ ತಮ್ಮ ಅಭಿಮಾನಿಗಳಿಗೇನು ನಿರಾಸೆ ಮಾಡಿಲ್ಲ. ಮೋಸ್ಟ್ ಎಕ್ಸ್‌ಪೆಕ್ಟೆಡ್ 'ಭೈರತಿ ರಣಗಲ್' ಸಿನಿಮಾದ ಮತ್ತೊಂದು ಹಾಡನ್ನು ರಿಲೀಸ್ ಮಾಡಿದ್ದಾರೆ. ಇದೇ ಸಿನಿಮಾದ "ಕಾವಲಿಗ.." ಅನ್ನೋ ಹಾಡು ಈಗಾಗಲೇ ಹೊರಬಿದ್ದಿದ್ದರು. ಹಾಡು ಕೇಳಿ ಶಿವಣ್ಣ ಫ್ಯಾನ್ಸ್ ಅಷ್ಟೇ ಅಲ್ಲ, ಸಂಗೀತ ಪ್ರಿಯರು ಕೂಡ ದಿಲ್ ಖುಷ್ ಆಗಿದ್ದಾರೆ.